ರೈಟ್ ರೈಟ್..ಟಿಕೆಟ್ ..ಟಿಕೆಟ್.. ಅಂತಾ ಕಂಡೆಕ್ಟರ್ ಬಂದರೆ ಗರಿಗರಿ ನೋಟು ತೆಗೆದುಕೊಟ್ರೆ ಸಾಕು ಶುರುವಾಗುತ್ತೆ ವಾಗ್ವಾದ.. ಯೆಸ್ .. ಪ್ರಯಾಣಿಕರು ಚಿಲ್ಲರೆ ಕೊಡದೇ ಎಲ್ಲರೂ ನೋಟು ಕೊಟ್ಟರೆ ಕಂಡೆಕ್ಟರ್‌ಗಳಿಗೆ ಚಿಲ್ಲರೆ ಕೊಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬಿಎಂಟಿಸಿ ದರ ಏರಿಕೆ ವೇಳೆ 10, 20 ರೂಪಾಯಿಯಂತೆ ಟಿಕೆಟ್ ದರ ಏರಿಕೆ ಮಾಡಿತು. ಆದ್ರೆ, ಮೈಸೂರು, ಮಡಿಕೇರಿ ಬೇರೆ ಬೇರೆ ಭಾಗದ ಟಿಕೆಟ್ ದರ 142, 203 ಹೀಗೆ ಇದ್ದಾಗ ಚಿಲ್ಲರೆ ಕೊಡಲು 10 ಜನರಿಗೆ ಸಾಧ್ಯ. ಆದ್ರೆ, ಪ್ರತಿಯೊಬ್ಬರು ಚಿಲ್ಲರೆ ಎಂದರೆ ಕಂಡೆಕ್ಟರ್‌ಗೆ ನಿದ್ದೆ ಕೆಡುವುದಂತೂ ಖಚಿತ.. ಈ ಸಂಬಂಧ ಸಂಚಾರ ನಿಯಂತ್ರಕ ಶ್ರೀನಿವಾಸ್ ನೇರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಬಿಎಂಟಿಸಿ ಸಂಚಾರ ನಿಯಂತ್ರಕ ಶ್ರೀನಿವಾಸ್ ನೇರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು.. ಪ್ರಯಾಣಿಕರು - ಸಿಬ್ಬಂದಿ ನಡುವಿನ ಸೌಹರ್ದ ಸಂಬಂಧಕ್ಕೆ ಸಹಕರಿಸಬೇಕು. ಈ ಪ್ರಕಾರ ಟಿಕೆಟ್ ದರವನ್ನ ಏರಿಕೆ - ಇಳಿಕೆ ಮಾಡಿ ಆದೇಶ ಹೊರಡಿಸಿ. ರೌಂಡ್ ಅಮೌಂಟ್ ಮಾಡಿ ಆದೇಶ ಮಾಡಿ ಎಂದು ಆಗ್ರಹಿಸಿದ್ದಾರೆ. ಕಾರಣ ಚಿಲ್ಲರೆಗಾಗಿ ನಿತ್ಯ ಕಂಡೆಕ್ಟರ್ - ಚಾಲಕರ ವಾಗ್ವಾದ ತಲೆ ಬಿಸಿ ತಂದಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಅಷ್ಟೇ ಅಲ್ಲ, ಇಲಾಖೆಯಂತೂ ಯಾವುದೇ ಚಿಲ್ಲರೆ ಕೊಡುವುದಿಲ್ಲ. ಸಣ್ಣ - ಪುಟ್ಟ ಅಂಗಡಿಗಳನ್ನ. ನೆಚ್ಚಿಕೊಂಡು ಗೊಗರೆದು ಚಿಲ್ಲರೆ ಪಡೆಯೊದು ದೊಡ್ಡ ಸವಾಲು.. ಪ್ರಯಾಣಿಕರು ಅರ್ಥ ಮಾಡಿಕೊಂಡು ಚಿಲ್ಲರೆ ಕೊಡಿ ಎಂದು ನಿರ್ವಾಹಕರು ಮನವಿ ಮಾಡುತ್ತಿದ್ರು ,ಪ್ರಯೋಜನಕ್ಕೆ ಬಂದಿಲ್ಲ..
ಏನೇ ಆಗಲೀ, ಚಿಲ್ಲರೆ ಗಲಾಟೆ ಗಂಟೆಗಟ್ಟಲೆ ಆದಾಗ ಸಾಕಷ್ಟು ಅನಾಹುತಗಳಿಗೂ ಎಡೆಮಾಡಿಕೊಡಬಹುದು.. ಒಂದು ಟಿಕೆಟ್ ದರ ರೌಂಡ್ ಅಮೌಂಟ್ ಆಗಿ ಪರಿವರ್ತನೆಯಾದರೆ ಪ್ರಯಾಣ ಕೊಂಚ ಶಾಂತಿಯುತವಾಗಿರುತ್ತದೆ ಎಂಬ ಲೆಕ್ಕಚಾರವೂ ಸಿಬ್ಬಂದಿಗಳಾಗಿದೆ .ಇದಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಏನಾದ್ರು ಪರಿಹಾರ ಕೊಡ್ತಾರಾ ಅಂತಾ ಕಾದುನೋಡಬೇಕಿದೆ..
BMTC and KSRTC Bus Conductors Face 'Change' Issue | Public TV
#publictv #bmtc